ವಾಷಿಂಗ್ಟನ್ (ಪಿಟಿಐ): ಲಾಸ್ ಏಂಜಲೀಸ್ನಲ್ಲಿರುವ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವು ಜೂನ್ 12ರಂದು ನಡೆಯಲಿದೆ. 23 ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. 'ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಅಮೆರಿಕದಲ್ಲಿ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಿದ ಶ್ರೇಯಸ್ಸು ಡಾ.ಎಚ್.ಆರ್.ನಾಗೇಂದ್ರ ಅವರಿಗೆ ಸಲ್ಲಬೇಕು' ಎಂದು ವಿ.ವಿ.ಯ ಸಂಸ್ಥಾಪಕ ನಿರ್ದೇಶಕ ಪ್ರೇಮ್ ಭಂಡಾರಿ ತಿಳಿಸಿದ್ದಾರೆ. ಭಾರತದ ಖ್ಯಾತ ಯೋಗ ಗುರು ಡಾ.ಎಚ್.ಆರ್.ನಾಗೇಂದ್ರ ಅವರು ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಚೇರಮನ್. ಅವರು ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವಿವೈಎಎಸ್ಎ) ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದಾರೆ. Read full article at Prajavani.net
Read More